ಅಜೆಕಾರು: ಹೃದಯಾಘಾತದಿಂದ ಯುವಕ ಮೃತ್ಯು

abhi
1 Min Read

 

 

 

 

ಕಾರ್ಕಳ, ನ.08: ತೀವೃ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಜೆಕಾರಿನ ಯುವಕನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ದಾರುಣ ಘಟನೆ ಶನಿವಾರ ನಡೆದಿದೆ.
ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಮೊಗಂಟೆಯ ಸುದರ್ಶನ ಶೆಟ್ಟಿ ಎಂಬವರ ಪುತ್ರ ಪುನೀತ್ ಶೆಟ್ಟಿ(37ವ) ಎಂಬವರು ಮೃತಪಟ್ಟ ಯುವಕ. ಶುಕ್ರವಾರ ರಾತ್ರಿ ತಮ್ಮ ಮನೆಯ ಬಳಿ ಸಂಬAಧಿಕರೊಬ್ಬರ ಮದುವೆ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ ಪುನೀತ್ ಗೆ ತಡರಾತ್ರಿ ಎದೆನೋವು ಕಾಣಿಸಿಕೊಂಡು ಬಳಿಕ ತೀವೃ ಹೃದಯಾಘಾತವಾಗಿತ್ತು. ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಪುನೀತ್ ಶೆಟ್ಟಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಇವರ ಅಕಾಲಿಕ ಸಾವಿನಿಂದ ಅಜೆಕಾರು ಜನತೆ ಆಘಾತಕ್ಕೊಳಗಾಗಿದೆ.
ಕಾರ್ಕಳದಲ್ಲಿ ಸೋಲಾರ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಪತ್ನಿ, ಪುಟ್ಟ ಮುಗು ಹಾಗೂ ಬಂಧುಗಳನ್ನು ಅಗಲಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

The post ಅಜೆಕಾರು: ಹೃದಯಾಘಾತದಿಂದ ಯುವಕ ಮೃತ್ಯು first appeared on karavalinews.com.

Share This Article
Leave a Comment