
ಕಾರ್ಕಳ : ವಂದೇ ಮಾತರಂ ಗೀತೆಗೆ 150 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಅ. 7ರಂದು ಬೆಳಿಗ್ಗೆ 10.30ಕ್ಕೆ ವಂದೇ ಮಾತರಂ ಸಾಮೂಹಿಕ ಗೀತೆ ಗಾಯನ ಕಾರ್ಯಕ್ರಮವು ವಿಕಾಸ ಕಚೇರಿಯಲ್ಲಿ ಶಾಸಕರು ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ಕಾರ್ಕಳದ ಮಂಡಲಾಧ್ಯಕ್ಷರಾದ ನವೀನ್ ನಾಯಕ್ ನೇತೃತ್ವದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಪ್ರಸಾದ್ ಐಸಿರ ಸೇರಿದಂತೆ ಪಕ್ಷದ ಪ್ರಮುಖರು, ಬಿಜೆಪಿ ಮಂಡಲ, ಮೋರ್ಚಾ, ಪ್ರಕೋಷ್ಠಗಳ ಸಹಿತ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

The post ವಂದೇ ಮಾತರಂಗೆ 150 ವರ್ಷದ ಸಂಭ್ರಮ : ಕಾರ್ಕಳ ಬಿಜೆಪಿ ವತಿಯಿಂದ ವಂದೇ ಮಾತರಂ ಗಾಯನ first appeared on karavalinews.com.


