KUPMA ಒಕ್ಕೂಟದ ಉಡುಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ

abhi
2 Min Read

ಕಾರ್ಕಳ: ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಒಕ್ಕೂಟ (KUPMA) ಇದರ ಉಡುಪಿ ಜಿಲ್ಲಾ ಕಾರ್ಯಕರಿಣಿ ಸಮಿತಿಯ ಗೌರವ ಅಧ್ಯಕ್ಷರನ್ನಾಗಿ ಡಾ. ಪ್ರಶಾಂತ್‌ ಶೆಟ್ಟಿ ದಂಡತೀರ್ಥ ಸಂಸ್ಥೆ ಕಾಪು ಹಾಗೂ ಅಧ್ಯಕ್ಷರನ್ನಾಗಿ ತ್ರಿಷಾ ಶಿಕ್ಷಣ ಸಂಸ್ಥೆಯ ಗೋಪಾಲಕೃಷ್ಣ ಭಟ್‌ ಅವರನ್ನು ಉಡುಪಿ ಓಸಿಯನ್‌ ಪರ್ಲ್ ನಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ನಿರ್ಣಯಿಸಲಾಯಿತು.

ಖಜಾಂಚಿಯಾಗಿ ಜ್ಞಾನಸುಧಾ ಸಂಸ್ಥೆಯ ಡಾ. ಸುಧಾಕರ್‌ ಶೆಟ್ಟಿ, ಕಾರ್ಯದರ್ಶಿಯಾಗಿ ಕ್ರಿಯೇಟಿವ್‌ ಸಂಸ್ಥೆಯ ಅಶ್ವತ್‌ ಎಸ್‌. ಎಲ್‌, ಸಹಕಾರ್ಯದರ್ಶಿಗಳಾಗಿ ಕ್ರಿಯೇಟಿವ್‌ ಸಂಸ್ಥೆಯ ಡಾ. ಗಣನಾಥ್‌ ಶೆಟ್ಟಿ, ಸುಜ್ಞಾನ ಸಂಸ್ಥೆಯ ಪ್ರತಾಪ್‌ ಚಂದ್ರ ಶೆಟ್ಟಿ,
ಉಪಾಧ್ಯಕ್ಷರುಗಳನ್ನಾಗಿ ಸುಜ್ಞಾನ ಸಂಸ್ಥೆಯ ರಮೇಶ್‌ ಶೆಟ್ಟಿ, ಎಕ್ಸಲೆಂಟ್‌ ಕುಂದಾಪುರದ ದೀಪಾ ಎಂ. ಹೆಗಡೆ, ಅಮೃತ ಭಾರತಿ ಹೆಬ್ರಿಯ ಸತೀಶ್‌ ಪೈ ಹಾಗೂ ರಾಜೇಶ್ವರಿ ಸಂಸ್ಥೆ ಕಾರ್ಕಳದ ದೇವಿಪ್ರಸಾದ್‌ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ಸಮಿತಿಯ ಗೌರವ ಉಪಾಧ್ಯಕ್ಷರಾದ ರಾಧಕೃಷ್ಣ ಶೆಣೈ, ಫಾದರ್‌ ವಿನ್ಸೆಂಟ್‌ ಕ್ರಾಸ್ತ, ಪ್ರೋ. ಆಲ್ಬಂಟ್‌ ರೋಡ್ರಿಗಸ್‌ (ದಂಡತೀರ್ಥ ಸಂಸ್ಥೆ) ನಾಗರಾಜ್‌ ಶೆಟ್ಟಿ ( SR ಸಂಸ್ಥೆ ಹೆಬ್ರಿ), KMES ಸಂಸ್ಥೆಯ ಇಮ್ತಿಯಾಜ್‌ ಭಾಗಿಯಾಗಿದ್ದರು.

ಸಮಿತಿಯ ನೂತನ ಪದಾಧಿಕಾರಿಗಳನ್ನು KUPMA ರಾಜ್ಯ ಸಮಿತಿಯ ಅಧ್ಯಕ್ಷರಾದ ಡಾ. ಮೋಹನ್‌ ಆಳ್ವರು ಹಾಗೂ ಕಾರ್ಯದರ್ಶಿಗಳಾದ ನರೇಂದ್ರ ನಾಯಕ್‌ ರವರು ಅಭಿನಂದಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

The post KUPMA ಒಕ್ಕೂಟದ ಉಡುಪಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ first appeared on karavalinews.com.

Share This Article
Leave a Comment