ನ.15 ರಂದು ಕಾರ್ಕಳದಲ್ಲಿ ಪಟ್ಲ ಫೌಂಡೇಶನ್ ನ ವಾರ್ಷಿಕ ಸಮಾರಂಭ

abhi
2 Min Read

ಕಾರ್ಕಳ: ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಾರ್ಕಳ ಘಟಕದ ಹತ್ತನೇ ವಾರ್ಷಿಕ ಸಮಾರಂಭವು ನವೆಂಬರ್ 15 ರಂದು ಶನಿವಾರ ಕಾರ್ಕಳ ಬಸ್ಸು ನಿಲ್ದಾಣ ಬಳಿಯ ಮಾರಿಗುಡಿ ವಠಾರದಲ್ಲಿ ಸಂಜೆ ಆರು ಗಂಟೆಯಿಂದ ನಡೆಯಲಿದೆ.

ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕ ಅದ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರ ಸಭಾದ್ಯಕ್ಷತೆಯಲ್ಲಿ ಕಾರ್ಕಳ ಕ್ಷೇತ್ರದ ಶಾಸಕರು, ಮಾಜಿ ಸಚಿವರಾದ ವಿ.ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ.
ಗೌರವ ಉಪಸ್ಥಿತಿಯಲ್ಲಿ ಕಾರ್ಕಳದ ಎಸ್. ಕೆ .ಎಸ್ ಇನ್ಫ್ರಾಪ್ರಾಕ್ಕ್ಚರ್ಸ್ ನ ಸುಜಯ್ ಶೆಟ್ಟಿ, ಅಜೆಕಾರ್ ನಂದ ಕುಮಾರ್ ಹೆಗ್ಡೆ, ಸಾಣೂರು ಯುವರಾಜ ಜೈನ್, ಹಾಗೂ ಕೇಂದ್ರೀಯ ಸಮಿತಿಯ ಪ್ರದಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ,, ಕೋಶಾದಿಕಾರಿ ಸುದೇಶ್ ಕುಮಾರ್ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ವ್ಯವಸಾಯ ಮಾಡಿ ನಿವೃತ್ತರಾದ ದಿ.ವಸಂತ ಆಚಾರ್ ಇವರಿಗೆ ಮರಣೋತ್ತರವಾಗಿ, ಮತ್ತು ನಂದಳಿಕೆ ಜನಾರ್ದನ ಶಾಸ್ತ್ರೀ ಇವರಿಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಿಕ್ಕಿದೆ. ಬೆಳ್ಮಣ್ಣು ಸುಭ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಲಿರುವರು. ನಂತರ ಪಾವಂಜೆಯ ಜ್ಞಾನಶಕ್ತಿ ಸುಬ್ರಹ್ಮಣ್ಯಮೇಳದವರಿಂದ ಕಾಲಮಿತಿಯಲ್ಲಿ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ ಕಲಾಭಿಮಾನಿಗಳಿಗೆ ಆದರದ ಸ್ವಾಗತ ಎಂದು ಸಂಸ್ಥೆಯ ಅದ್ಯಕ್ಷ ವಿಜಯ ಶೆಟ್ಟಿ, ಕಾರ್ಯದರ್ಶಿ ಮಹಾವೀರ ಪಾಂಡಿಯವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

The post ನ.15 ರಂದು ಕಾರ್ಕಳದಲ್ಲಿ ಪಟ್ಲ ಫೌಂಡೇಶನ್ ನ ವಾರ್ಷಿಕ ಸಮಾರಂಭ first appeared on karavalinews.com.

Share This Article
Leave a Comment