
ಕಾರ್ಕಳ: ನುರಾಳ್ ಬೆಟ್ಟು ಕ್ರಾಸ್ ಬಳಿ ನೂರಾಳ್ ಬೆಟ್ಟು ಕಡೆಯಿಂದ ಹೊಸ್ಮಾರ್ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಿಕಪ್ ಚಾಲಕ ಜೀವಿತ್ ಮತ್ತು ಈದು ಗ್ರಾಮದ ಪ್ರಶಾಂತ್ ಸೇರಿಕೊಂಡು ಸಂಭಂದಪಟ್ಟ ಇಲಾಖೆಯಿಂದ ಪರವಾನಿಗೆ ಪಡೆಯದೇ ಈದು ಗ್ರಾಮದ ಕುಡ್ಯೆ ಎಂಬಲ್ಲಿಂದ ಸುಮಾರು 1 ಯುನಿಟ್ ಮರಳನ್ನು ಕಳವು ಮಾಡಿ ಪಿಕಪ್ ನಲ್ಲಿ ಸಾಗಾಟ ಮಾಡುತ್ತಿದ್ದು, ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

The post ಕಾರ್ಕಳ: ಅಕ್ರಮ ಮರಳು ಸಾಗಾಟ,ಪ್ರಕರಣ ದಾಖಲು first appeared on karavalinews.com.


