ಕಾರ್ಕಳ: ಮಹಿಳೆಯ ಚಿನ್ನಾಭರಣ ಅಡವಿರಿಸಿ ವಂಚನೆ

abhi
2 Min Read

ಕಾರ್ಕಳ: ಮಹಿಳೆಯೊಬ್ಬರನ್ನು ನಂಬಿಸಿ ಚಿನ್ನಾಭರಣ ಪಡೆದು ಅಡವಿರಿಸಿ ಹಣ ಪಡೆದು ಬಳಿಕ ಮಹಿಳೆಗೆ ಚಿನ್ನಾಭರಣಗಳನ್ನು ಬಿಡಿಸಿ ಕೊಡದೆ ವಂಚನೆ ಎಸಗಿರುವ ಪ್ರಕರಣ ನಡೆದಿದೆ.
ಕಾರ್ಕಳ ಹಿರ್ಗಾನ ಗ್ರಾಮದ ನಿವಾಸಿಗಳಾದ ಸಯ್ಯದ್ ಯುನೀಸ್ ಹಾಗೂ ಸಯ್ಯದ್ ಸುಹೇಲ್ ಎಂಬವರು ಕಸಬಾ ಗ್ರಾಮದ ರುಭೀನಾ ಬಾನು ಅವರನ್ನು ನಂಬಿಸಿ 2020 ರಲ್ಲಿ ಅವರ ಚಿನ್ನಾಭರಣಗಳನ್ನು ಪಡೆದು ರಾಜಪುರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಕುಕ್ಕುಂದೂರು ಶಾಖೆ ಹಾಗೂ ಸುಬ್ರಹ್ಮಣ್ಯ ಸೇವಾ ಸಹಕಾರಿ ಸಂಘ ಕಾರ್ಕಳ ಶಾಖೆಯಲ್ಲಿ ಅಡವಿರಿಸಿ, ನಂತರ ಆಭರಣಗಳನ್ನು ಬಿಡಿಸಿ ಕೊಡುವುದಾಗಿ ಹೇಳಿದ್ದರು.
ಆದರೆ ಈವರೆಗೂ ಆರೋಪಿಗಳು ರುಭೀನಾ ಬಾನು ಅವರ ಚಿನ್ನಾಭರಣಗಳನ್ನು ಬಿಡಿಸಿ ಕೊಡದೆ ಮೋಸ ಮಾಡಿದ್ದಾರೆ ಎಂದು ನ್ಯಾಯಾಲಯದ ಖಾಸಗಿ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

The post ಕಾರ್ಕಳ: ಮಹಿಳೆಯ ಚಿನ್ನಾಭರಣ ಅಡವಿರಿಸಿ ವಂಚನೆ first appeared on karavalinews.com.

Share This Article
Leave a Comment