ಬೆಳೆ ಸಾಲಗಳಿಗೆ ಮಾರ್ಜಿನ್ ಹಣ ಕಡಿತ : ಮಾರ್ಜಿನ್ ಹಣ ಏರಿಸಲು ಸಹಕಾರ ಭಾರತಿ ಅಗ್ರಹ

abhi
2 Min Read

ಕಾರ್ಕಳ, ನ.04: ರೈತರಿಗೆ ನೀಡುವ ಬೆಳೆ ಸಾಲ ಮದ್ಯಮಾವಧಿ ಸಾಲಗಳ ವ್ಯವಹಾರದಲ್ಲಿ ಬಡ್ಡಿಯ ಮಾರ್ಜಿನ್ ಹಣ 3% ರಷ್ಟನ್ನು ರಾಜ್ಯ ಸರ್ಕಾರ 2015 – 16 ರ ವರೆಗೆ ನೀಡುತ್ತಾ ಬಂದಿದ್ದು, ಇದರಿಂದ ಸಹಕಾರ ಸಂಘಗಳಿಗೆ ಬಹಳ ಅನುಕೂಲವಾಗಿತ್ತು.

ತದನಂತರದ ವರ್ಷಗಳಲ್ಲಿ ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬಂದಿದ್ದು, ಈಗ ಸರಕಾರದ ಸಹಕಾರಿ ಇಲಾಖೆಯ ಕಾರ್ಯದರ್ಶಿಗಳ ಪತ್ರ ‌ಬರೆದು, ಸಾಲ ನೀಡುವಿಕೆಗೆ ಸಂಘಗಳಿಗೆ ಕೊಡುತ್ತಿದ್ದ ಮಾರ್ಜಿನ್ ಹಣವನ್ನು 1.75 % ಇಳಿಕೆ ಮಾಡಲಾಗಿದ್ದು,ಇದು ಸಹಕಾರಿ ಸಂಘಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಸಹಕಾರ ಭಾರತಿಯ ರಾಜ್ಯಾಧ್ಯಕ್ಷ ಪ್ರಭುದೇವ ಆರ್ ಮಾಗನೂರ ಆರೋಪಿಸಿದ್ದಾರೆ.

ಸರಕಾರದ ಈ ಆದೇಶದಿಂದಾಗಿ ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ದೊಡ್ಡ ಆರ್ಥಿಕ ಹೊಡೆತ ನೀಡಿದಂತಾಗಿದೆ. ಆರ್ಥಿಕ ಇಲಾಖೆಯವರ ಪ್ರಕಾರ ಪ್ರತಿ ವರ್ಷ ಸಾಲ ನೀಡುವಿಕೆ 200 ರಿಂದ 500 ಕೋಟಿ ರೂಪಾಯಿ ಹೆಚ್ಚಾಗುತ್ತಿದ್ದು, ಇದರಿಂದ ಸಂಘಗಳಿಗೆ ಹೆಚ್ಚಿನ ಮಾರ್ಜಿನ್ ಹಣ ದೊರೆಯುತ್ತಿದ್ದು, ಆದುದರಿಂದ ಸರಕಾರ ಮಾರ್ಜಿನ್ ಹಣವನ್ನು ಕಡಿಮೆ ಮಾಡಿರುತ್ತದೆ ಎಂದು ಸಮಜಾಯಿಸಿಕೆ ನೀಡಿದ್ದು, ಸರಕಾರವೇ ಸಹಕಾರಿ ಸಂಘಗಳ ನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದ್ದು ಮಾತ್ರವಲ್ಲದೇ ಸಹಕಾರ ವ್ಯವಸ್ಥೆಯ ಮೇಲೆ ಗದಾಪ್ರಹಾರಕ್ಕೆ ಸರ್ಕಾರ ಮುಂದಾಗಿದೆ.

ಆದುದರಿಂದ ಕೂಡಲೇ ಮಾರ್ಜಿನ್ ಹಣವನ್ನು ಏರಿಸಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೆರವನ್ನು ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸರಕಾರವೇ ಸಹಕಾರಿ ಸಂಸ್ಥೆಗಳ ಕತ್ತು ಹಿಚುಕಲು ಹೊರಟರೆ,ಸಹಕಾರ ಭಾರತಿ ಅನಿವಾರ್ಯವಾಗಿ ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿಪತ್ತಿನ ಸಹಕಾರಿವಸಂಘಗಳ ಉಳಿವಿಗಾಗಿ ಬೃಹತ್ ಹೋರಾಟ ನಡೆಸುವುದು ಅನಿವಾರ್ಯ ಎಂದು ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

The post ಬೆಳೆ ಸಾಲಗಳಿಗೆ ಮಾರ್ಜಿನ್ ಹಣ ಕಡಿತ : ಮಾರ್ಜಿನ್ ಹಣ ಏರಿಸಲು ಸಹಕಾರ ಭಾರತಿ ಅಗ್ರಹ first appeared on karavalinews.com.

Share This Article
Leave a Comment