
ಕಾರ್ಕಳ: ಈದ್ ಮಿಲಾದ್ ವೇಳೆ ತೋರಣ ಕಟ್ಟುವ ವಿಚಾರಕ್ಕೆ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿರುವ ಘಟನೆ ನ.2 ರಂದು ನಡೆದಿದೆ.
ಕಾರ್ಕಳ ಕಸಬಾ ಗ್ರಾಮದ ತಪ್ಸೀರ್ ಎಂಬವರು ತಮ್ಮ ಬೈಕಿನಲ್ಲಿ ಜರಿಗುಡ್ಡೆ ಎಂಬಲ್ಲಿರುವ ಮಸೀದಿಗೆ ನಮಾಜ್ ಮಾಡಲು ತನ್ನ ಅಣ್ಣನೊಂದಿಗೆ ಹೋಗುತ್ತಿದ್ದ ವೇಳೆ ಅಪ್ರೋಜ್ ಎಂಬಾತ ತನ್ನ ಗೂಡ್ಸ್ ಟೆಂಫೋವನ್ನು ತಪ್ಸೀರ್ ರವರ ಸ್ಕೂಟಿಗೆ ಅಡ್ಡಗಟ್ಟಿ ʻ ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ.
ಈ ಹಿಂದೆ ಈದ್ ಮಿಲಾದ್ ಹಬ್ಬದ ವೇಳೆಗೆ ಅಪ್ರೋಜ್ ಮನೆಯ ಬಳಿ ತೋರಣ ಕಟ್ಟುವ ವಿಚಾರದಲ್ಲಿ ಗಲಾಟೆ ಮಾಡಿರುವುದೇ ಇದಕ್ಕೆ ಕಾರಣವಾಗಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 
 
 
 
 
 
 
 
 
 
 
 
 
 
 
 
 
 
 
 
 
 
 
 
The post ಕಾರ್ಕಳ:ಈದ್ ಮಿಲಾದ್ ಗೆ ತೋರಣ ಕಟ್ಟುವ ವಿಚಾರದಲ್ಲಿ ಗಲಾಟೆ: ವ್ಯಕ್ತಿಗೆ ನಿಂದನೆ ಜೀವ ಬೆದರಿಕೆ first appeared on karavalinews.com.


 
 
 
 
 
 